Verse 1

ಯೆಹೋವ ಪ್ರಾಪ್ತಕಾಲದ
ಸುಬದ್ರ ದುರ್ಗಸ್ಥಲ
ಶತ್ರುಂಗಳನ್ನು ಜೈಸುವ
ಶ್ರೇಷ್ಠಾಸ್ತ್ರ ನಿಜ ಬಲ.
ಹಳೇ ವೈರಿಯು
ಈಗ ಮುನಿದು
ಮಹಾ ಶಕ್ತಿಯಿಂ
ಕುಯುಕ್ತಿತಂತ್ರದಿಂ
ವಿರೋಧ ನಿಂತಿದ್ದಾನೆ.

Verse 2

ನಮ್ಮಲ್ಲಿ ತ್ರಾಣವಿಲ್ಲವು
ನಾಂ ಗೆಲ್ಲ ಶಕ್ತರಲ್ಲ
ಯೆಹೋವನಾಯ್ದ ಶೂರನು
ವಿಜಯ ಕೊಡ ಬಲ್ಲ.
ಅದಾರೆಂದರೆ
ಯೇಸು ಕ್ರಿಸ್ತನೆ
ಎಲ್ಲಾ ಸೃಷ್ಟಿಗು
ಸರ್ವೇಶನಾತನು
ಮತ್ತೊಬ್ಬ ದೇವರಿಲ್ಲ.

Verse 3

ಭೂ ದೆವ್ವ ತುಂಬಿದ್ದಾದರು
ನಮ್ಮನ್ನು ನುಂಗೊದಿಲ್ಲ
ವಿಜಯಗತಿ ನಮ್ಮದು
ನಮ್ಮಲ್ಲಿ ಭಯವಿಲ್ಲ.
ಈ ಲೋಕೇಶನು
ಸಿಟ್ಟಿಗೆದ್ದನು
ಹ್ಯಾಗೂ ನಿಲ್ಲನು.
ಅಂತ್ಯಾಜ್ಞೆಯಾಯಿತು
ಈ ಒಂದೆ ಮಾತು ಸಾಕು.

Verse 4

ಯಾವಾತ ಬಂದು ಕೀಳ್ವನು
ಪವಿತ್ರ ವಾಕ್ಯವನ್ನು?
ದಿವ್ಯಾತ್ಮನಾಳುತ್ತಿರ್ವನು
ಸದ್ಭಕ್ತ ಸಭೆಯನ್ನು
ಸತೀಸುತರೂ
ಹೊನ್ನೂ ಹೆಸರು
ಎಲ್ಲಾ ಹೋಗಲಿ
ನೀ ವೈರಿ ಸೋಲುವಿ
ರಾಜ್ಯಾದಿ ನಮ್ಮ ಪಾಲು.

Go to top