Verse 1

ನರಪುತ್ರರಡ್ಡ ಬೀಳಿ
ಸಾಷ್ಟಾಂಗ ಧೂಳಿಯಲ್ಲಿ ಬೀಳಿ
ಯೆಹೋವ ಸದಾಸ್ವಾಮಿಗೆ.
ನಿಮ್ಮನ್ನುಂಟುಮಾಡಿದ್ದಾನೆ
ಕೆಟ್ಠೋದ ಮಕ್ಕಳನ್ನು ತಾನೆ
ವಿಮುಕ್ತಿಗೈದನಲ್ಲವೆ?
ಆತಂಗೆ ನಮಿಸಿ
ಆತನ್ನ ಬಲ್ಲಿರಿ
ಸರ್ವತ್ರಾಣಿ
ಸ್ವಯಂಭುವು
ಸರ್ವಜ್ಞನು
ದೀನರ ನ್ಯಾಯಾಧೀಶನು.

Verse 2

ಸೃಷ್ಟಿ ಕರ್ತ ಬಳಿಯಲ್ಲಿ
ನಾವೆಲ್ಲ ಕೂಡಿ ಬರುವಲ್ಲಿ
ಸಂತಾಪ ಕ್ಲೇಶ ಕಣದೋ?
ಬೊಗ್ಗಿದವರಾಗಿ ಬನ್ನಿ
ಕಣ್ಣೀರಿನಿಂದ ಬೇಡಿ ಅನ್ನಿ
ಕೃಪಾಳು ಕರ್ತ ತಾಳಿಕೋ.
ಮಧ್ಯಸ್ಥ ಕ್ರಿಸ್ತನ
ಕೊಟ್ಟಂಥ ತಾರಕ
ಕೇಳು ಕೇಳು
ಕಟಾಕ್ಷಿಸು
ಕರುಣಿಸು
ಕ್ರಿಸ್ತ್ಯೇಸುವಲ್ಲಿ ರಕ್ಷಿಸು.

Verse 3

ನಮಸ್ಕಾರ ಮಾಡಿರಿಂದು
ಕ್ರಿಸ್ತ್ಯೇಸುಪಿತ ಪ್ರೀತಿಸಿಂಧು
ಹೌದಾತ ವಿಶ್ವಪ್ರೇಮಿಯು.
ದೀರ್ಘಶಾಂತನಾಗಿದ್ದಾನೆ
ಅಕ್ರಮಗಾರಗನ್ನುತ್ತಾನೆ
ಹಾಳಾಗಬೇಡ ಬದುಕು.
ಕಲ್ಲಾಗ ಬಾರದು
ಹೃದ ಮಾರ್ಪಡಿಸು
ಕೇಳು ಕೇಳು
ನೀ ಕೇಳದೆ
ಮುಂದ್ಹೋದರೆ
ಕೋಪಾಗ್ನಿಗಿನ್ನು ಪಾತ್ರನೆ.

Verse 4

ಎಚ್ಚರಾಗಿ ಬನ್ನಿ ಬನ್ನಿ
ಈ ಹೊತ್ತು ಬಂದು ಧೂಪ ತನ್ನಿ
ವ್ಯಾಕುಲವೆಂಬ ಧೂಪವೆ.
ಕನಿಕರವುಳ್ಳ ತಂದೆ
ಒಂದೊಂದು ಕುರಿ ಇಡೀ ಮಂದೆ
ತಾ ಮಾಡುತ್ತಾನೆ ಪಾಲನೆ.
ಇನ್ನಲ್ಪ ಕಾಲವು
ಸಿಕ್ಕೀತು ಬಾಗಲು
ಬನ್ನಿ ಬನ್ನಿ
ವಿಶ್ವಾಸದಿ
ಪ್ರವೇಶಿಸಿ
ಕ್ರಿಸ್ತ್ಯೇಸುವಲ್ಲಿ ಬಾಳಿರಿ.

Go to top