Verse 1

ಹಾ ಭಾಗ್ಯವುಳ್ಳ ದಿನ
ವಿಶ್ರಾಂತಿ ಕಾಲವು
ಸಂಭ್ರಮ ಪಡತಕ್ಕ
ಗಂಭೀರ ವೇಳೆಯು.
ಈ ದಿವ್ಯವಾದ ದಿನ
ಅಮೂಲ್ಯ ಸಂಪತ್ತು
ನನ್ನಾತ್ಮಕ್ಕೆ ಸುರತ್ನ
ಸಂತೋಷವಾದದ್ದು.

Verse 2

ಈ ದಿನ ಯೇಸು ಕರ್ತ
ಸಮಾಧಿ ಬಿಟ್ಟನು
ಈ ದಿನ ಲೋಕೋದ್ಧಾರ
ಸಂಸಿದ್ಧವಾಯಿತು
ಈ ದಿನ ದೇವರಾತ್ಮ
ಆಗಮಿಸಿದನು
ಈ ದಿನ ಸಮಾಧಾನ
ಹೆಚ್ಚಾಗಿ ಸಿಕ್ಕೊದು.

Verse 3

ಈ ಹೊತ್ತು ಕ್ರೈಸ್ತ ಸಭೆ
ಎಲ್ಲೆಲ್ಲು ಕೂಡುತೆ
ಎಲ್ಲೆಲ್ಲಿಯೂ ಸುವಾರ್ತೆ
ಪ್ರಸಂಗವಾಗುತ್ತೆ
ಮೊಬ್ಬಾದ ಮನದಲ್ಲಿ
ಪ್ರಕಾಶ ಹುಟ್ಟುತೆ
ಸದ್ಭಕ್ತಜನರಲ್ಲಿ
ಆಸಕ್ತಿ ಹೆಚ್ಚುತೆ.

Verse 4

ಈ ದಿನ ದೇವಧ್ಯಾನ
ಹೆಚ್ಚಾಗಿ ಮಾಡುವೆ
ವಿಮೋಚನಾಸಂಗೀತ
ಇಂಪಾಗಿ ಹಾಡುವೆ.
ಭೂಲೋಕದೀ ವಿಶ್ರಾಂತಿ
ಸಮಾಪ್ತವಾದರು.
ಮೇಲ್ಲೋಕದಾ ವಿಶ್ರಾಂತಿ
ಎಂದೆಂದೂ ತೀರದು.

Go to top