Verse 1

ಇಂದು ಸಬ್ಬತಾಗಿದೆ
ಹರ್ಷಕರ ದಿನವೆ.
ಇಂದು ನಾನೇಕಾಂತದಲ್ಲಿ
ಲೋಕಗದ್ದಲಿಲ್ಲದೆ
ದೇವಧ್ಯಾನ ಮಾಡುವೆ
ಸೇರಿ ದೇವರೈಕ್ಯದಲ್ಲಿ
ಐಕ್ಯದಲ್ಲಿ.

Verse 2

ಇಂದು ಸಬ್ಬತಾಗಿದೆ
ಹರ್ಷಕರ ದಿನವೇ.
ಹುಡುಕೋಣ ಕೃಪಾಸ್ಥಾನ
ಮೇಲಕ್ಕೆತ್ತಿ ಹೃದಯ
ಇಲ್ಲಿ ದೇವರಾಲಯ
ಪರಿಶುದ್ಧ ಸನ್ನಿಧಾನ
ಸನ್ನಿಧಾನ.

Verse 3

ಇಂದು ಸಬ್ಬತಾಗಿದೆ
ಹರ್ಷಕರ ದಿನವೆ.
ಪರಿಶುದ್ಧ ವಾಕ್ಯವನ್ನು
ಮನ ಕೊಟ್ಟು ಓದುವಾ
ಅದರಿಂದ ಹೊಂದುವಾ
ದಿವ್ಯ ಆತ್ಮತ್ರಾಣವನ್ನು
ತ್ರಾಣವನ್ನು.

Verse 4

ಇಂದು ಸಬ್ಬತಾಗಿದೆ
ಹರ್ಷಕರ ದಿನವೆ.
ಸೇರಿ ದೇವಗೃಹದಲ್ಲಿ
ಸರ್ವಭಕ್ತರೊಂದಿಗೆ
ಆತನನ್ನು ಬೇಡಲೆ
ತೃಪ್ತಿಯಗೋದಾತ್ಮದಲ್ಲಿ
ಆತ್ಮದಲ್ಲಿ.

Verse 5

ಇಂದು ಸಬ್ಬತಾಗಿದೆ
ಹರ್ಷಕರ ದಿನವೆ.
ದೇವಸ್ತೋತ್ರವಾದ ಮೇಲೆ
ಕೂಡಿಕೊಂಡು ಕೇಳಿದ
ವಾಕ್ಯದಭಿಪ್ರಾಯವ
ಹೆಳ್ವದೆಷ್ಟೋ ರಮ್ಯ ವೇಳೆ
ರಮ್ಯ ವೇಳೆ.

Verse 6

ಇಂದು ಸಬ್ಬತಾಗಿದೆ
ಹರ್ಷಕರ ದಿನವೆ.
ಭಾಗ್ಯವಂತರಾಗಿದ್ದೇವೆ
ದೇವರೊಲ್ಮೆಧ್ಯಾನದಿ
ಲೋಕಚಿಂತೆ ತ್ಯಜಿಸಿ
ಹೃತ್ಸಂತೋಷ ಪಡುತ್ತೇವೆ
ಪಡುತ್ತೇವೆ.

Go to top