Verse 1

ಸಂರಕ್ಷಕನು
ನಂಗೊಲಿದರೆ
ಎನ್ ಪ್ರಾರ್ಥನೆಯ
ತಾ ಕೇಳಿದರೆ
ನಾ ಸತ್ತರೂ ಸಾಯೆ
ವಿಜೈಸುವೆನು
ಕ್ರಿಸ್ತ್ಯೇಸುವು ನನ್ನ
ಉದ್ಧಾರಕನು.

Verse 2

ಸಂಕಷ್ಟಗಳು
ಹೆಚ್ಚಾಗುತ್ತಲೆ
ಹೃದ್ವೇದನೆಯು
ಉಕ್ಕೇರಿದರೆ
ನಾ ಸೋತರೂ ಸೋಲೆ
ವಿಜೈಸುವೆನೆ
ಕ್ರಿಸ್ತ್ಯೇಸುವು ನನ್ನ
ಉದ್ಧಾರಕನು.

Verse 3

ಸಂಬಂಧಿಕರು
ಕೈ ಬಿಟ್ಟಿದ್ದರೆ
ಸಂಗಾತಿಗಳು
ಹಿಂಜರಿದರೆ
ನಾ ಮೇಲೆ ಕಣ್ಣೆತ್ತಿ
ನಂಬಿರುವೆನು
ಕ್ರಿಸ್ತ್ಯೇಸುವು ನನ್ನ
ಉದ್ಧಾರಕನು.

Verse 4

ಸಿಂಹಾಸನಕೆ
ನಾನೆರಗುವೆ
ಈ ಬಿನ್ನಹವಂ
ನಾ ಜಪಿಸುವೆ
ಈ ಪಾಪಿಯಂ ತ್ರಾಹಿ
ಉದ್ಧಾರಕನೇ
ಕೈ ನೀಡು ಕೈ ನೀಡು
ಸಂರಕ್ಷಕನೇ.

Go to top