Verse 1

ಕ್ರಿಸ್ತ್ಯೇಸು ದಯವಿಟ್ಟು
ನಮ್ಮಲ್ಲಿ ವಾಸಿಸು
ಆಗೆಲ್ಲ ಭಯ ಬಿಟ್ಟು
ಸಂಧೈರ್ಯಗೊಂಬೆವು.

Verse 2

ನಮ್ಮಿಶ ನಿನ್ನ ಮಾತು
ಪೂರೈಸಿ ಸಲಹು
ಆದಿರಲೆಮ್ಮ ಧಾತು
ಎಂದೆಂದೂ ಕುಂದದು.

Verse 3

ನೀ ಸೂರ್ಯ ನಿನ್ನ ಕಾಂತಿ
ನಮ್ಮಲ್ಲಿ ಸುರಿಸು
ಅದೆಸೆವಾಗ ಭ್ರಾಂತಿ
ಏನೊಂದು ಹತ್ತದು.

Verse 4

ಈಯ್ ನಿನ್ನ ಆಶೀರ್ವಾದ
ಸುಧನಿ ಸರ್ವಥಾ
ಈಯ್ ಮಿಗುಮಿಗಿಲಾದ
ಐಶ್ವರ್ಯವರವಾ.

Verse 5

ವೀರೇಶ ನೀ ಸಹಾಯ
ಕೊಟ್ಟೆಮ್ಮ ಪಾಲಿಸು
ಆರ್ಯಂಬುಗಳ ಗಾಯ
ನೀನೆರೆ ತಾಗದು.

Verse 6

ನೀ ಕೊಟ್ಟ ಭಾಷೆಯನು
ಈಡೇರಿಸರಸೆ
ವಿಶ್ವಾಸಶೀಲವನ್ನು
ಕೊಡೆಲ್ಲ ಕಾಲಕೆ.

Verse 7

ಮೃತೀಲಿಯೂ ವಿಶ್ರಾಂತಿ
ತಾ ಬಡ ಪಾಪಿಗೆ
ನಿಂಗಾಗಲಿನ್ನು ಶಾಂತಿ
ಎಂದನ್ನು ಯೇಸುವೇ.

Go to top