Verse 1

ಯಾವಾತ ಕ್ರಿಸ್ತಸೈನ್ಯದಿ
ಸೇರಿದ್ದು ಯುದ್ಧವ
ಸುಧೈರ್ಯದಿಂದ ಸಹಿಸಿ
ಹೊರಾಡ ಬರುವ?
ಅಂಥವ ಸೇರಲಿ
ಆ ರಣರಂಗದಿ.
ಚೆನ್ನಾಗಿ ಲಕ್ಷ್ಯವಿಡಲಿ
ಸೈನ್ಯೆಶವಾಕ್ಯದಿ.

Verse 2

ಲೋಕಾನುಭೋಗ ಸಿಕ್ಕೀತು
ಈ ಸೈನ್ಯ ಸೇರಲು
ಎಂದೆಣಿಸಿದರಾದೀತು
ಆಘೋರ ಮೋಸವು.
ಶರೀರಸುಖವು
ಪ್ರಖ್ಯಾತ ಹೆಸರು.
ಈ ಲೋಕದಂತೆ ವೈಭವ
ಕೊಟ್ಟಾನೊ ಅರಸ?

Verse 3

ಮೈಗಳ್ಳನಿಂದ ಕೂಡದು
ಈ ಘನಸಂಘದಿ.
ಸೋಮಾರಿಯನ್ನು ತೆಗೆದು
ಬಿಟ್ಟಾರು ಹಾಸ್ಯದಿ.
ಹುಶಾರಿ ಎಲ್ಲರು
ಇಲ್ಲಿದ್ದು ಗೈವರು
ಆಯಾಸ ಬೇಸರಿಲ್ಲದೆ
ತಮ್ಮಿಶನಪ್ಪಣೆ.

Verse 4

ನಿಶಾನಿ ಉಂಟೀ ಸೈನ್ಯಕು
ಕೆಂಪಾಗಿ ಮೆರ್ಯುತಾ
ಈ ಧ್ವಜ ಕಡೆಗೆಲ್ಲರು
ಬರುತ್ತಾರೋಡುತಾ.
ಕ್ರೂಜೇಲಿ ಕ್ರಿಸ್ತನು
ಸ್ವರಕ್ತ ಕೊಟ್ಟನು
ಈ ಕ್ರೂಜೆ ಪ್ರತಿಯೊಬ್ಬಗು
ವಿಜಯಧ್ವಜವು.

Verse 5

ನೀನಿಗ ಕ್ರಿಸ್ತಸೈನಿಕ
ಗುರಾಣಿ ಖೇಡ್ಯವು
ಇಬ್ಬಾಯಿ ಕತ್ತಿ ಕವಚ
ಇವನ್ನು ಧರಿಸು.
ಸದ್ವೇದ ಜ್ಞಾನವು
ಸುನೀತಿ ಜಪವು.
ವಿಶ್ವಾಸ ತಾಳ್ಮೆ ನಿನಗೆ
ಶಸ್ತ್ರಾಸ್ತ್ರ ನಿಜವೆ.

Verse 6

ದುರ್ವೈರಿಗುಂಪು ದೊಡ್ಡದು
ಎಷ್ಟೋ ಭಯಂಕರ.
ಸದ್ಭಕ್ತಮಂದೆ ಸಣ್ಣದು
ಮಹಾ ಶಾಂತಿಕರ.
ಪಾತಾಳರಾಜನು
ಪ್ರಾರಂಭದುಷ್ಟನು
ನಿನ್ನಾತ್ಮ ಕೊಂದು ಹಾಕುವ
ಪ್ರಯತ್ನ ಮಾಡುವ.

Verse 7

ತನ್ನುರಿಬಾಣ ಎಸೆದು
ನಿನ್ನೆದೆ ಕಡೆಗೆ
ನೀ ನಿದ್ರೆ ಮಾಡುತಿರಲು
ಬಂದಾನು ಫಕ್ಕನೆ.
ನೀ ನಿದ್ರೆ ತಿಳಿದು
ಶೂರಾತ್ಮನಾಗಿದ್ದು
ಚೆನ್ನಾಗಿ ಹೋರದಿದ್ದರೆ
ಸೋತ್ಹೋದೀ ತಪ್ಪದೆ.

Verse 8

ಈ ಕೆಟ್ಟ ಲೋಕ ತಂತ್ರದಿ
ಉರ್ಲೊಡ್ಡಿ ಹೊಂಚೊದು
ನಿನ್ನನ್ನು ಮೋಸಗೋಳಿಸಿ
ಕೆಟ್ಠೋಗ ಮಾಡೊದು.
ಬೇರೊಂದು ಸಮಯ
ಹಿಂಸಾದಿ ಭಯವ
ಪ್ರಯೋಗ ಮಾಡಿ ನಿನ್ನನು
ಸ್ವಾಧೀನ ಮಾಡೊದು.

Verse 9

ಒಮ್ಮೊಮ್ಮೆ ತಾಪತ್ರಯವು
ರೋಗಾದಿ ದುಃಖವು
ಅಪತ್ತು ಬಡತನವು
ಬಂದೊದಗುವವು.
ವಿಶ್ವಾಸ ಕುಂದುತಾ
ಪ್ರೀತ್ಯಗ್ನಿ ನೊಂದುತಾ
ಸದ್ಭಕ್ತಿ ಹೋಗೆ ಮರಣ
ಬಂತೆಷ್ಟೋ ಹತ್ತರ.

Verse 10

ವಿಶ್ವಾಸದಲ್ಲಿ ಊರುತ್ತಾ
ಪೌರುಷ ತೋರಿಸು.
ತ್ರಾಣಾತ್ಮನಾಗಿ ಹೊರುತಾ
ಎಚ್ಚತ್ತುಕೊಂಡಿರು.
ನಿನ್ನೀಶ ಬೇಗನೆ
ನಿನ್ನಡಿ ಕೆಳಗೆ
ವೈರಾಳುಗುಂಪು ಜಜ್ಜೋನು
ವಿಜಯ ಕೊಡೊನು.

Verse 11

ಪ್ರತ್ಯೊಬ್ಬ ನಂಬಿಗಸ್ತನು
ಹೋರಿದನಂತರ
ಆ ಲೋಕದಲ್ಲಿ ಹೊಂದ್ವನು
ಅತ್ಯಂತ ಸಂಬಳ.
ಎಲ್ಲೋ ಸುದಾಸನೆ
ಎಂದ್ಹೇಳಿ ಆತಗೆ
ಭಂಗಾರದ ಕಿರೀಟವ
ಕೊಡೋನೀ ಅರಸ.

Verse 12

ಶ್ರೀ ಯೇಸು ನಿನ್ನ ಸೈನ್ಯಕೆ
ನಾ ಸೇರ ಬಂದೆನು.
ಸ್ವಕೀಯ ಪರಿವಾರಕೆ
ನನ್ನನ್ನು ನೇಮಿಸು.
ಈ ಯುದ್ಧದೊಳಗೆ
ನಾ ಧೈರ್ಯ ಬಿಡದೆ
ಹೋರಾಡಿ ಜಯ ಹೊಂದಲು
ಕರ್ತಾ ನೀ ನಡಿಸು.

Go to top