Verse 1

ಯೇಸುಪಾದದಲಿ
ಕೂತು ಮರ್ಯಳು
ಜ್ಞಾನ ಪಡಕೊಂಡು
ಧನ್ಯಳಾದಳು.
ದಿವ್ಯ ಜ್ಞಾನಬೋಧವು
ಬೇರೆ ಎಲ್ಲೂ ಕಾಣದು.
ಯೇಸು ಪಾದದಲ್ಲೆ
ನನ್ನ ಸ್ಥಾನವು
ಆತನುಪದೇಶ
ಕೀಳಿ ಬಾಳ್ವೆನು.

Verse 2

ಯೇಸುಪಾದದಲ್ಲಿ
ನಾನು ಕೂಡ್ರಲೆ
ಲೋಕದಾಟ ಕಾಟ
ದೂರ ಓಡುತೆ.
ಬೇರೆ ಯಾವ ಸ್ವಾಮಿಯು
ಆತ್ಮತೃಪ್ತಿ ನೀಡನು.
ಯೇಸುಪಾದದಲ್ಲಿ
ಸಮಾಧಾನವೆ.
ಲೋಕಭ್ರಾಂತಿ ನಿಂತು
ಶಾಂತಿ ಹೊಂದುವೆ.

Verse 3

ಯೇಸುಪಾದದಲ್ಲಿ
ನಾನು ಸೇರಲೆ
ಕೆಟ್ಟ ಇಚ್ಛೆಯಾಶೆ
ತೀರಿ ಹೋಗುತೆ
ಬೇರೆ ಯಾವ ಸ್ವಾಮಿಯು
ಚಿತ್ತಶುದ್ಧಿ ಮಾಡನು.
ಯೇಸುಪಾದದಲ್ಲಿ
ಗರ್ವ ತಗ್ಗುತೆ
ಯೇಸು ಸ್ನೇಹದಿಂದ
ಶುದ್ಧಿ ಹೊಂದುವೆ.

Go to top