Verse 1

ನಾನು ನಿನ್ನವ ಪ್ರಿಯ ಕರ್ತನೆ
ನಿನ್ನ ವಾಕ್ಯ ಕೇಳಿದೆ
ಇನ್ನು ಕೇವಲ ನಿನ್ನನ್ಯೋನ್ಯಕ್ಕೆ
ಸೇರೋದೆನ್ನ ಕೋರಿಕೆ.
ಎಳೆ ನನ್ನ (ಎಳೆ)
ಪ್ರೀಯ ಕರ್ತನೇ
ನಿನ್ನ ಕ್ರೂಜೆ ಕಂಬಕ್ಕೆ
ಎಳೆ ನನ್ನ ಎಳೆ
ಪ್ರಿಯ ಕರ್ತನೇ
ನಿನ್ನ ತಿವೀದೆದೆಗೆ.

Verse 2

ನಿನ್ನ ಸೇವೆಗೆ ಪ್ರಿಯ ರಕ್ಷಕ
ನೀ ಪ್ರತಿಷ್ಠಿಸೆನ್ನನ್ನು
ದಯಪಾಲಿಸು ದೃಢ ನಿಶ್ಚಯ
ನಿನ್ನ ಚಿತ್ತ ನನ್ನದು.
ಎಳೆ ನನ್ನ (ಎಳೆ)
ಪ್ರೀಯ ಕರ್ತನೇ
ನಿನ್ನ ಕ್ರೂಜೆ ಕಂಬಕ್ಕೆ
ಎಳೆ ನನ್ನ ಎಳೆ
ಪ್ರಿಯ ಕರ್ತನೇ
ನಿನ್ನ ತಿವೀದೆದೆಗೆ.

Verse 3

ನಾನು ಒರಗಿ ನಿನ್ನ ಪಾದಕ್ಕೆ
ಸುಸಂವಾದ ಮಾಡುತ
ನಿನ್ನ ಸಂಗಡ ಇರ್ವ ಗಳಿಗೆ
ಎಂಥಮೂಲ್ಯ ಸಂತಸ.
ಎಳೆ ನನ್ನ (ಎಳೆ)
ಪ್ರೀಯ ಕರ್ತನೇ
ನಿನ್ನ ಕ್ರೂಜೆ ಕಂಬಕ್ಕೆ
ಎಳೆ ನನ್ನ ಎಳೆ
ಪ್ರಿಯ ಕರ್ತನೇ
ನಿನ್ನ ತಿವೀದೆದೆಗೆ.

Verse 4

ತಳವಿಲ್ಲದ ಪ್ರೀತಿಸಾಗರ
ಬುದ್ಧ್ಯತೀತ ಹರ್ಷವೆ
ನನಗಾಗಲು ನಿನ್ನ ದರ್ಶನ
ನಿತ್ಯ ಸ್ತೋತ್ರ ನಿನಗೆ.
ಎಳೆ ನನ್ನ (ಎಳೆ)
ಪ್ರೀಯ ಕರ್ತನೇ
ನಿನ್ನ ಕ್ರೂಜೆ ಕಂಬಕ್ಕೆ
ಎಳೆ ನನ್ನ ಎಳೆ
ಪ್ರಿಯ ಕರ್ತನೇ
ನಿನ್ನ ತಿವೀದೆದೆಗೆ.

Go to top