Verse 1

ದೇವ ಸೇವೆ ಮಾಡು
ಕಾಲ ನೀಗುತೆ
ಜಾಗರೂಕನಾಗು
ಜನ ಸಾಯುತೆ.
ವಾಕ್ಯ ಸಾರಿ ಹೇಳು
ತಡ ಮಾಡದೆ
ಹೋಗಿ ಸಾರಿ ಹೇಳು
ರಾತ್ರಿ ಬರುತೆ.

Verse 2

ದೇವ ಕಾರ್ಯ ನೋಡು
ಘನವುಳ್ಳದೇ
ಮನಸಿಟ್ಟು ಮಾಡು
ಪ್ರೀತಿಯಿಂದಲೇ.
ದಿವ್ಯ ಬಹುಮಾನ
ಯೋಗ್ಯ ದಾಸಗೆ
ಯೇಸು ಕರ್ತನಿಂದ
ದೊರಕುತ್ತದೆ.

Verse 3

ಜನರೆಲ್ಲ ಕೂಡಿ
ಸರ್ವ ಕಾಲವು
ದೇವಸ್ತೋತ್ರ ಮಾಡಿ
ಅಡ್ಡ ಬೀಳಲು
ತನ್ನ ಪೀಠದಲ್ಲಿ
ನಿನಗಂಬನು
ನೀನು ನಂಬಿಗಸ್ತ
ಒಳ್ಳೇ ದಾಸನು.

Go to top