Verse 1

ಪ್ರಧಾನ ಗುರು ಯೇಸುವೇ
ಪವಿತ್ರ ಸಭಾಶಿರಸ್ಸೇ
ಪ್ರಸನ್ನನಾಗು ನಮಗೆ
ಆಲೈಸು ನಮ್ಮ ಪ್ರಾರ್ಥನೆ.

Verse 2

ಈ ಸಭೆ ಕಾಯುವದಕೆ
ಈಗಿಡಲ್ಪಟ್ಟ ದಾಸಗೆ
ಬೇಕಾದ ವರ ಪಾಲಿಸು
ನಿನ್ನಾತ್ಮನಿಂದ ತುಂಬಿಸು.

Verse 3

ನಿನ್ನರವನ್ನು ಪೋಷಿಸ
ಸನ್ಮಾರ್ಗವನ್ನು ತೋರಿಸ
ಸಹಾಯ ಮಾಡು ನಿತ್ಯವು
ಸುಫಲವನ್ನು ಹುಟ್ಟಿಸು.

Verse 4

ಈ ಸೇವೆ ತೀರಿಸೀತನು
ಮೇಲ್ಲೋಕದಲ್ಲಿ ಸೇರಲು
ಕಿರೀಟ ದಯಪಾಲಿಸು
ಮಹತ್ತಿನಲ್ಲಿ ಸೇರಿಸು.

Go to top