Verse 1

ಆ ಕಾನದಲ್ಲಿ ಮದಿವೆ
ಉಂಟಾಗಲಾಗಿ ಪ್ರಸ್ತಕೆ
ಕ್ರಿಸ್ತ್ಯೇಸು ತಾನೆ ಹೋದನು
ತನ್ನಾಶೀರ್ವಾದ ಕೊಟ್ಟನು.

Verse 2

ಅದೇ ಪ್ರಕಾರ ಈಗಲು
ನಮ್ಮೊಂದಿಗಿದ್ದು ಹರಸು
ಈಗಾಗುವಂಥ ಮದಿವೆ
ನೀ ಶುಭ ಮಾಡು ಯೇಸುವೆ.

Verse 3

ವಿಶ್ವಾಸ ಭಕ್ತಿ ಹೆಚ್ಚೆಚ್ಚು
ಈ ಇಬ್ಬರಲ್ಲಿ ಬೆಳಿಸು
ತಮ್ಮೊಳಗಿರುವೈಕ್ಯದಿ
ಸಂತೋಷವಾಗಿ ಬಾಳಲಿ.

Verse 4

ಕ್ರಿಸ್ತ್ಯೇಸು ನೀನು ನಿತ್ಯವು
ಈ ಇಬ್ಬರನ್ನು ನಡಿಸು
ಈ ಲೋಕ ಬಿಡುವಾಗಲು
ನೀನಿರುವಲ್ಲಿ ಸೇರಿಸು.

Go to top