Verse 1

ಸ್ವರ್ಗಿಯ ಪಿತನೇ
ನೀ ಪ್ರೀತಿಯಬ್ಧಿಯೇ
ನೀನೆಲ್ಲ ಉಂಟು ಮಾಡಿದೆ
ಸಂಪ್ರೀತಿಯಿಂದಲೆ.

Verse 2

ಈ ಕೂಸಿಗೀಗಲು
ಕಟಾಕ್ಷ ತೊರಿಸು
ಸದ್ಭಕ್ತಿಯಲ್ಲಿ ಬೇಳಿಸು
ಕಾಪಾಡಿ ರಕ್ಷಿಸು.

Verse 3

ಕ್ರಿಸ್ತ್ಯೇಸು ಒಡೆಯ
ನೀನೊಳ್ಳೇ ಕುರುಬ
ನಿನ್ ಮಂದೆಗೀಗ ಸೇರಿಸು
ಈ ನಮ್ಮ ಕೂಸನ್ನು.

Verse 4

ನಿನ್ನಲ್ಲಿ ಬೆಳದು
ನಿಂಗಾಗಿ ಬಾಳಲಿ
ಈ ಜೀವಯಾತ್ರೆ ಮಾಡಲು
ಕರ್ತಾ ನೀ ಸಲಹು.

Verse 5

ಪವಿತ್ರ ಆತ್ಮನೇ
ನೀ ದಿವ್ಯ ಜೀವವೇ
ಅನಂತ ಜೀವ ಪಾಲಿಸು
ಈ ಪ್ರೀಯ ಕೂಸಿಗು.

Verse 6

ಕಳಂಕವೆಲ್ಲವಂ
ನೀ ತೊಳೆ ಕಾಂತಿಯಂ
ನೀ ವರ್ಧಿಸು ತ್ರಯೈಕನೇ
ಸಂಸ್ತುತಿ ನಿನಗೆ.

Go to top