Verse 1

ಶುಭವಾರ್ತಾ ಘೋಷ
ಎಲ್ಲ ಲೋಕಕು.
ಹಬ್ಬಿಸೋ ಸಂತೋಷ
ಎಷ್ಟೋ ದೊಡ್ಡದು.
ದುಷ್ಟ ರಾಜಬಲ
ಮುರಿದ್ಹಾಕುವ
ಕ್ರಿಸ್ತಗಿಳೆಯೆಲ್ಲ
ವಶ ಮಾಡುವ.

Verse 2

ಅತಿ ಶ್ರೇಷ್ಠ ಪ್ರೀತಿ
ಸ್ತೋತ್ರ ಮಾಡುತಾ.
ಪರಿಶುದ್ಧ ನೀತಿ
ಸಾರಿ ಹೇಳುತಾ
ಎಲ್ಲ ದಿಕ್ಕಿಗ್ಹೋಗಿ
ಸರ್ವಜನರ
ದೇವರ್ರಾಜ್ಯಕ್ಕಾಗಿ
ಜಗ್ಗ ನೋಡುವ.

Verse 3

ನಮಗೆಷ್ಟೊ ಕಷ್ಟ
ಹಿಂಸೆ ಬಂದರೂ
ಯೇಸುಸೇವೆ ನಷ್ಟ
ಆಗದೆಂದಿಗೂ.
ಹೊರ ಕ್ರೂಜೆಯನ್ನು
ಮಾನವಲ್ಲವೋ?
ನಮ್ಮ ಸೇವೆಯನ್ನು
ಕರ್ತ ಈಸಿಕೋ.

Verse 4

ಯಾವನನ್ನು ನಾನು
ಕಳುಹಿಸಲಿ?
ಯಾವನು ಹೋದಾನು?
ಎಂದು ಕೇಳುತ್ತಿ
ಕರ್ತಾ ನಾವಿದ್ದೇವೆ
ಕಳುಹೆಮ್ಮನ್ನು.
ನಿನ್ನ ಯುದ್ಧಸೇವೆ
ನಮಗಿಷ್ಟವು.

Verse 5

ಯಾವನು ನಿನ್ನನ್ನು
ಅರಿತಿದ್ದಾನೋ
ಅವ ತಿಳಿದ್ದನ್ನು
ಹೇಳದಿರ್ವನೋ?
ಪಾಪಪರಿಹಾರ
ಹೊಂದಿದವನು
ಶುಭಸಮಾಚಾರ
ಸಾರದಿರನು.

Verse 6

ಕರ್ತಾ ನೀನೆಮ್ಮನ್ನು
ಸಿದ್ಧಪಡಿಸು.
ಎಲ್ಲ ದೋಷವನ್ನು
ಪರಿಹರಿಸು.
ನಿನ್ನ ಆತ್ಮಸ್ನಾನ
ಅನುಗ್ರಹಿಸು.
ಸೇವೆಗೊಳ್ಳೇ ದಾನ
ದಯಪಾಲಿಸು.

Verse 7

ತನುಮನಧನ
ಸೇವೆಗೀಯುವ
ಒಳ್ಳೆ ಆಳು ಜನ
ದೊಡ್ಡ ಸಂಖ್ಯೆಯ
ಕಳುಹಿಸಿ ಕೊಡು
ನಿನ್ನ ಪೈರಿಗೆ.
ಅವರಲ್ಲಿ ಇಡು
ನಿನ್ನ ಮಹಿಮೆ.

Verse 8

ಭ್ರಷ್ಟ ಲೋಕವನ್ನು
ಕರ್ತ ದೃಷ್ಟಿಸು.
ಶಾಂತಿರಾಜ್ಯವನ್ನು
ಬಂದು ಸ್ಥಾಪಿಸು.
ನರಮನಸ್ಸನ್ನು
ತಿರುಗಿಸಯ್ಯಾ.  
ಸೇರಿಸೆಲ್ಲರನ್ನು
ರಕ್ಷಿಸೋಡೆಯಾ.

Go to top