Verse 1

ಕ್ರಿಸ್ತ್ಯೇಸು ಎದ್ದು ಬಂದನು
ಸಮಸ್ತ ಶತ್ರುಸೈನ್ಯವು
ಕಂಗೆಟ್ಟು ನಾಚಿ ಸೋತದೆ.
ನೀ ಯೇಸು ಸಿಂಹಾಸನಕೇರಿದಿ
ಇನ್ನಿಹವ ಪರವನಾಳುವಿ.
ಹಲ್ಲೆಲೂಯ ರಾಜಸೂಯ
ಗೈದು ಬಂದ ಜೀವ ತಂದ
ಕ್ರೈಸ್ತ ಜನ ಹಾಡಿರೆಲ್ಲ
ಕ್ರಿಸ್ತ ಯೇಸು ಎದ್ದನು.

Verse 2

ಐ ಮೃತ್ಯುಂಜಯಶಾಲಿಯೆ
ನೀ ಶೇಷ ಶಿರ ಜಜ್ಜಿದೆ
ಪ್ರವಾದಿವಾಕ್ಯಕಿಂತಲೂ
ಸಮಾಧಿಯುತ್ಥಾನದ ಮೂಲದಿ
ಉತ್ಕøಷ್ಟ ಸಾಮ್ರಾಜ್ಯವ ನೆಟ್ಟಿದ್ದೀ.
ಹಲ್ಲೆಲೂಯ ರಾಜಸೂಯ
ಗೈದು ಬಂದ ಜೀವ ತಂದ
ಕ್ರೈಸ್ತ ಜನ ಹಾಡಿರೆಲ್ಲ
ಕ್ರಿಸ್ತ ಯೇಸು ಎದ್ದನು.

Verse 3

ನಮ್ಮೆಲ್ಲ ಪಾಪ ಶಾಪವು
ಸಂತಾಪ ಶೋಕ ಚಿಂತೆಯು
ಈ ಜಯದಿಂದ ತೀರಿವೆ.
ನೀ ಗೆದ್ದ ಪ್ರಕಾರ ನಾಂ ಗೆಲ್ವೆವು
ನೀನೆದ್ದ ಪ್ರಕಾರ ನಾವೇಳ್ವೆವು.
ಹಲ್ಲೆಲೂಯ ರಾಜಸೂಯ
ಗೈದು ಬಂದ ಜೀವ ತಂದ
ಕ್ರೈಸ್ತ ಜನ ಹಾಡಿರೆಲ್ಲ
ಕ್ರಿಸ್ತ ಯೇಸು ಎದ್ದನು.

Go to top