Verse 1

ನೀ ಬಾಳುತ್ತೀ ಭೂಪರಲೋಕದಿ
ನೀನಧಿಕಾರ ನಡಿಸಿದ್ದರಲ್ಲಿ.
ಪ್ರಭಾವ ಪಡೆದಾಳುತ್ತಿರುವಿ
ಅಜಿತಸಿಂಹ ನೀ ಲೋಕಾಂತ್ಯದಲ್ಲಿ.
ಶತ್ರುಂಗಳನ್ನು ನಾಶ ಮಾಡುವಿ
ನೀ ಬಾಳುತ್ತೀ.

Verse 2

ನೀ ಬಾಳುತ್ತೀ ಈ ಮಾತು ನನಗೆ
ಸಂತೋಷ ಕೊಡೋದು ಭೂಯಾತ್ರೆಯಲ್ಲಿ.
ವಿಶ್ವಾಸದಿಂದ ನಾನು ಬಿಡದೆ
ನಿನ್ನನ್ನು ನೋಡುತ್ತೇನೆ ಪ್ರಭೆಯಲ್ಲಿ.
ಅಮರ ಕರ್ತ ಜೀವವೆನಗೂ
ನೀ ಪಾಲಿಸು.

Verse 3

ನೀ ಬಾಳುತ್ತೀ ಶ್ರೀ ಯೇಸು ಕ್ರಿಸ್ತನೇ
ಈ ಮಾತು ಸಾಕು ಸರ್ವ ಕಷ್ಟದಲ್ಲೂ.
ನೀನಿರೆ ನನಗೇನು ಕಡಿಮೆ?
ನಿನ್ನನುಗ್ರಹ ಹೊಂದಿ ಅದರಲ್ಲೂ.
ನಾ ಮುಂದೆ ಹೋಗುತ್ತೇನೆ ತಂಗದೆ
ಸಾಲೇಮಿಗೆ.

Go to top