Verse 1

ನಾನ್ ಊರು ಗ್ರಾಮ ದೇಶವ
ಸಂಚಾರ ಮಾಡಲು
ಯೆರೂಸಲೆಮ ನಗರ
ನಿನ್ನೆಪ್ಪು ತಪ್ಪದು.

Verse 2

ಪವಿತ್ರ ನಿನ್ನ ಕಾಂತಿಯು
ಹೃದ್ದøಷ್ಟಿ ಪ್ರಿಯವೆ
ಉತ್ಕøಷ್ಟ ಪಟ್ಣ ನಿನ್ನನು
ನಾನೆಂದೂ ಮರೆಯೆ.

Verse 3

ಸರ್ವೇಶ ಪ್ರತಿಕಾಂತಿಯ
ಕಂಡಚಲಂಗಳೇ
ನಿಮ್ಮನ್ನು ಏರಿ ನೋಡುವ
ಸಂತೋಷ ದೊಡ್ಡದೇ.

Verse 4

ಚೆಲೋದು ನಿನ್ನ ತೀರವು
ಗೆನೇಜರೇತುವೇ
ಆ ಘನವುಳ್ಳ ಕರ್ಮೆಲು
ಸೌಂದರ್ಯವಾದದೇ.

Verse 5

ಆ ಹಿಮವಂತ ಹೆರ್ಮೊನು
ಗಿಲ್ಯಾದು ಯೆರಿಖೋ
ಬೆಥ್ಲೇಮ ಬೈಲು ಕಾನವು
ಕಣ್ಗಿಂಪು ಅಲ್ಲವೋ.

Verse 6

ಆದಾಗ್ಯೂ ಶ್ರೇಷ್ಠವೆನಗೆ
ಎಲ್ಲಾದಕ್ಕಿಂತಲು
ನನ್ನೀಶ ಘೋರ ವೇದನೆ
ತಾಳಿದ್ದ ಸ್ಥಳವು.

Verse 7

ಅತೀಷ್ಟ ಇಪ್ಪೆಗುಡ್ಡವೇ
ಪವಿತ್ರ ಗೊಲ್ಗಥ
ನಿಮ್ಮಲ್ಲಿ ಹುಟ್ಟಿ ಬಂತೆಲೇ
ಜಗತ್ಸಂಜೀವನ.

Go to top