Verse 1

ಈ ಲೋಕದಪರಾಧವ
ಕೊಂಡೊಯ್ವ ಕುರಿಮರಿ.
ಮನುಷ್ಯಪಾಪದಂಡನೆ
ತಿಂದಳಿಸುತ್ತೆ ಸರಿ.
ಸಂತೋಷವೆಲ್ಲವಗಲಿ
ತನ್ನನ್ನು ಹಿಂಸೆಗೊಪ್ಪಿಸಿ
ಸಂಕಷ್ಟಕೊಳಗಾಗಿ
ಪೆಟ್ಟ್ ಹಾಸ್ಯ ಗಾಯ ಶಿಲುಬೆ
ನಾ ಸೋಸಲೊಲ್ಲೆ ನೆನ್ನದೆ
ಸಾಯುತ್ತೆ ಬಲಿಯಾಗಿ.

Verse 2

ಆ ಕುರಿ ಯಾವದಂದರೆ
ಅತೀಷ್ಟ ಯೇಸು ತಾನೆ.
ಈತನ್ನ ಪಾಪನಾಶಕೆ
ಸರ್ವೇಶ ಕೊಟ್ಟಿದ್ದಾನೆ.
ನೀ ಹೋಗಿತಾಳು ಸಾವನು
ಪಾಪಿಷ್ಠರಂ ವಿಮೋಚಿಸು
ಇದಕ್ಕೆ ನೀನೆ ಶಕ್ತ
ಕೋಪಾಗ್ನಿ ಪಾಪ ದಂಡನೆ
ದೊಡ್ಡದು ಪ್ರಾಯಶ್ಚಿತ್ತಕೆ
ಉಪಾಯ ನಿನ್ನ ರಕ್ತ.

Verse 3

ಕ್ರಿಸ್ತ್ಯೇಸುವೆಂದ ತಂದೆಯೆ
ನಾ ತಾಳ್ವೆನೆಲ್ಲವನ್ನ
ನಿನ್ನತಿಪ್ರೀಯ ಅಪ್ಪಣೆ
ನನ್ನೊಂದೆ ಇಷ್ಟ ಅನ್ನ.
ಆಶ್ಚರ್ಯವಾದ ಪ್ರೀತಿಯೇ
ನಿನ್ನಿಂದ ಏಕಪುತ್ರನೇ
ಪಿತಂಗೆ ದೂರವಾದ.
ಚೈತನ್ಯವುಳ್ಳಪ್ರೀತಿಯೇ
ಪ್ರಶಸ್ತ ಜೀವರಾಜನೇ
ನಿನ್ನಿಂದ ಮೃತನಾದ.

Verse 4

ಓ ಪ್ರೀತಿ ನಾನು ನಿತ್ಯಕೆ
ನಿನ್ನನ್ನೇ ನೆನೆದೇನು
ನನ್ನಪ್ಪಿಕೊಂಡ ಪ್ರೀತಿಯೇ
ನಾ ನಿನ್ನನಪ್ಪಿಯೇನು.
ನೀನೆನ್ನ ಜೀವಕಾಂತಿಯೆ
ನಿನ್ನಾಳು ನಾನು ನಿನಗೆ
ನನ್ನನ್ನು ಒಪ್ಪಿಸ್ಯೇನು
ಆ ಲೋಕವಂ ಪ್ರವೇಶಿಸಿ
ನೀ ಕೊಟ್ಟ ಮಡಿವಸ್ತ್ರದಿ
ನಿನ್ನೈಕ್ಯ ಪಡೆದೇನು.

Go to top