Verse 1

ದೇವರ ಕುಮಾರನು
ಸೇರುತಾನೆ ಚೀಯೋನಲ್ಲಿ
ಸಭೆ ಸ್ತೋತ್ರ ಮಾಳ್ಪುದು
ಪೂರ್ಣ ಹೃದಾನಂದದಲ್ಲಿ
ಲೋಕವಡ್ಡ ಬೀಳುತೆ
ಯೇಸು ಕ್ರಿಸ್ತ ನಾಮಕೆ.

Verse 2

ಆತ ನೀತಿರಾಜನು
ದೀನ ನರನಾಗಿದ್ದಾನೆ
ದಾಸಬಂಧ ಹರಿದು
ಬಿಡುಗಡೆ ಕೊಡುತಾನೆ
ಕುರುಡಂಗೆ ಬೆಳಕು
ಕ್ಷೇಮ ರೋಗಿಗಾತನು.

Verse 3

ಮೃತ್ಯು ಬಲ ಮುರಿದು
ಹಳೇ ಹಾವ ತಲೆಯನ್ನು
ಜಜ್ಜಿ ಬಿಟ್ಟ ಶೂರನು
ಈಯುತಾನೆ ಕ್ಷೇಮವನ್ನು
ಪಾಪ ನಾಶವಾಗುತೆ
ಯೇಸುರಾಜ್ಯದೊಳಗೆ.

Verse 4

ಶತ್ರುಸೈನ್ಯ ತುಳಿದು
ದೇವಲೋಕಪ್ರಭೆಯಲ್ಲಿ
ಸೇರ್ದ ಜಯಶಾಲಿಯು
ಆಳುತಾನೆ ನಿತ್ಯದಲ್ಲಿ.
ಯೇಸು ಕ್ರಿಸ್ತ ರಾಜ್ಯವು
ಎಂದೂ ತೀರಿ ಹೋಗದು.

Verse 5

ನನ್ನ ಹೃದದೊಳಗೆ
ಹೀನ ಮಾಡಿ ಪಾಪವನ್ನು
ಆಳು ಘನರಾಜನೆ
ನನ್ನ ಪೂರ್ಣ ಮನಸ್ಸನ್ನು
ನಿನ್ನ ಶಾಂತ ರಾಜ್ಯವೆ
ಸುಖಮಯ ನಮಗೆ.

Go to top