Verse 1

ಯೇಸು ಕ್ರಿಸ್ತಗೆನ್ನ ಪ್ರಾಣ
ವಶ ಮಾಡಿ ಕೊಟ್ಟದೆ
ದೇಹ ಬಿಡುವ ಪ್ರಯಾಣ
ರಮ್ಯವಾದದೆನಗೆ.
ಈ ಪ್ರಪಂಚ ತೊರೆಯೋದು
ನನಗೆ ಸಂತೋಷವು
ಕ್ರಿಸ್ತನೈಕ್ಯ ಪಡೆಯೋದು
ನನ್ನ ಸುಖಪೂರ್ತಿಯು.

Verse 2

ಇಹಪರದಲ್ಲಿ ಭೀತಿ
ನನಗಿನ್ನು ಬಾರದು
ಯೇಸು ಕ್ರಿಸ್ತನಾಥ ಪ್ರೀತಿ
ನನ್ನ ಒಂದೆ ಗೀತವು.
ಆತ ನೋಡಿ ನನ್ನ ಶಾಪ
ಚೆಲ್ಲಿ ತನ್ನ ರಕ್ತವ
ರಕ್ತದಿಂದ ನನ್ನ ಪಾಪ
ಪರಿಹಾರ ಮಾಡಿದ.

Verse 3

ಬುದ್ಧಿ ಕೆಟ್ಟ ಶತ್ರುವನ್ನು
ಸ್ನೇಹ ಮಾಡಲೊಲೆದು
ತಪ್ಪಿ ಹೋದ ಕುರಿಯನ್ನು
ಹುಡುಕುತ್ತಲಿದ್ದನು.
ಆತ್ಮ ಪೂರ್ಣ ಸ್ನೇಹದಿಂದ
ಯೇಸುವನ್ನು ಹುಡುಕು
ನಿನ್ನ ಪೂರ್ಣ ಶಕ್ತಿಯಿಂದ
ಆತನನ್ನು ಸೇವಿಸು.

Go to top