Verse 1

ಯೇಸುವನ್ನು ಆದುಕೊಂಡೆ
ಆತನತಿ ಪ್ರಿಯನೇ.
ಆತನಲ್ಲಿ ಹರ್ಷಗೊಂಡೆ
ಆತ ಜೀವಜ್ಯೋತಿಯೇ.
ನನ್ನ ಆತ್ಮದಾಪ್ತನೇ
ಯೇಸುವೇ
ವಾಸ ಮಾಡೆನ್ನೊಳಗೆ ಒಳಗೆ
ಎನ್ನನೊಯ್ಯಿ ಮೇಲಕೆ.

Verse 2

ಯೇಸುವನ್ನು ಆದುಕೊಂಡೆ
ಕ್ರಿಸ್ತಮೃತಿಯಿಂದಲೆ.
ಪಾಪ ಪರಿಹಾರಗೊಂಡೆ
ಭಯವಿಲ್ಲ ನನಗೆ.
ನನ್ನ ಆತ್ಮ ದಾಪ್ತನೇ
ಯೇಸುವೇ
ವಾಸ ಮಾಡೆನ್ನೊಳಗೆ ಒಳಗೆ
ಎನ್ನನೊಯ್ಯಿ ಮೇಲಕೆ.

Verse 3

ಯೇಸುವನ್ನು ಆದುಕೊಂಡೆ
ಆತ ಪರಿಶುದ್ಧನೆ.
ಬಹು ಆತ್ಮ ದಾಹಗೊಂಡೆ
ರಕ್ಷಾ ಕರ್ತನೈಕ್ಯಕೆ.
ನನ್ನ ಆತ್ಮ ದಾಪ್ತನೇ
ಯೇಸುವೇ
ವಾಸ ಮಾಡೆನ್ನೊಳಗೆ ಒಳಗೆ
ಎನ್ನನೊಯ್ಯಿ ಮೇಲಕೆ.

Verse 4

ಯೇಸುವನ್ನು ಆದುಕೊಂಡೆ
ಆತ್ಮ ಒಪ್ಪಿಸ್ಯಾತಗೆ.
ಸಾಯಲಿಕ್ಕೆ ಕಾಂಕ್ಷೆಗೊಂಡೆ
ಆತನೆನ್ನ ಬಿಡೋನೆ?
ನನ್ನ ಆತ್ಮ ದಾಪ್ತನೇ
ಯೇಸುವೇ
ವಾಸ ಮಾಡೆನ್ನೊಳಗೆ ಒಳಗೆ
ಎನ್ನನೊಯ್ಯಿ ಮೇಲಕೆ.

Verse 5

ಯೇಸುವನ್ನು ಆದುಕೊಂಡೆ
ಆತನಲ್ಲಿ ನಂಬಿಕೆ
ಇಟ್ಟು ಮೃತ್ಯುಂಜಯನಾದೆ
ಮೇಲ್ವಿಶ್ರಾಂತಿ ಸೇರುವೆ
ನನ್ನ ಆತ್ಮ ದಾಪ್ತನೇ
ಯೇಸುವೇ
ವಾಸ ಮಾಡೆನ್ನೊಳಗೆ ಒಳಗೆ
ಎನ್ನನೊಯ್ಯಿ ಮೇಲಕೆ.

Go to top