Verse 1

ನನ್ನತಿ ಪ್ರೀಯ ನಿಜ ತ್ರಾಣ
ನನ್ನತಿಪ್ರಿಯ ಒಡವೆ.
ನಿಂಗೊಲಿಯುತ್ತದೆನ್ನ ಪ್ರಾಣ
ನೀನೆನ್ನ ನಿತ್ಯ ಆಶೆಯೆ.
ಹೃದ್ ಭಿನ್ನವಾಗೊ ವರೆಗು
ನೀ ಜೀವ ಜ್ಯೋತಿಯು.

Verse 2

ನನ್ನತಿ ಪ್ರೀಯ ಪ್ರಾಣಸ್ಥಾನ
ನೀ ಪರಮೋತ್ತಮಾಪ್ತನು.
ನಾ ಮಾಳ್ಪೆ ನಿನ್ನ ಮೈಮೆ ಧ್ಯಾನ
ನೀ ಜೀವ ಕೊಡೊ ವರೆಗು.
ನೀ ಮದಲಿಂಗನೆನಗೆ
ದೇವರ ಕುರಿಯೇ.

Verse 3

ಅನಾದಿ ರಮಣೀಯ ಕಾಂತಿ
ನಾ ಮರ್ತು ನಿನ್ನ ಭಜನೆ
ನನ್ನೊಂದೆ ಗತಿ ಸತ್ಯ ಶಾಂತಿ
ನಿನ್ನನ್ನು ಪ್ರೀತಿ ಮಾಡದೆ
ಇಷ್ಠೊತ್ತು ಸುಮ್ಮನಿದ್ದದು
ನಂಗೊಂದೆ ಚಿಂತೆಯು.

Verse 4

ನಿನ್ನರ್ಯದಿರೆ ಲೋಕಾಚಾರ
ಸಂಭ್ರಮ ಕೊಟ್ಟಿತೆನಗೆ
ಕಣ್ಗಾಣದಿಹದಂಧಕಾರ
ಬೆಳ್ಕೆಂತ ಅಲೆದಾಡಿದೆ.
ನಿನ್ನೊಲ್ಮೆಯಿಂದಲೀಗಲೇ
ನಾ ಕಂಡೆ ನಿನ್ನನೇ.

Verse 5

ಪ್ರಾಭಾವಮಯ ಸತ್ಯದಿತ್ಯ
ನೀ ಮೂಡೆ ದೃಷ್ಠಿ ಹೊಂದಿದೆ.
ಐ ಶಾಪ ಪರಿಹಾರಿ ನಿತ್ಯ
ಆನಂದವಿತ್ತಿ ನನಗೆ.
ನಿನ್ನಾಶೀರ್ವಾದ ರೋಗಿಗೆ
ಆರೋಗ್ಯ ಕೊಟ್ಟದೆ.

Verse 6

ನನ್ನಡಿ ಲೋಕಯಾತ್ರೆಯಲ್ಲಿ
ಜಾರೀತು ಸ್ವಾಮಿ ರಕ್ಷಿಸು
ನೀನಾದುಕೊಂಡ ಮಾರ್ಗದಲ್ಲಿ
ಕೈ ಹಿಡಿದೆನ್ನ ನಡಿಸು
ನೀ ವ್ಯಾಪಿಸೆನ್ನ ಆತ್ಮವ
ಸ್ವರ್ಗೀಯ ಭಾಸ್ಕರ.

Verse 7

ಕಣ್ಣೀಲಿ ಹುಟ್ಟಿತಶ್ರುಧಾರೆ
ಎದೇಲಿ ಶುದ್ಧ ಮೋಹವು
ನಾ ನಿನಗೆದುರಾಡಲಾರೆ
ಆಸಕ್ತ ದಾಸನಾದೆನು.
ನನ್ನಾತ್ಮ ಬುದ್ಧಿ ಮನಸ್ಸು
ನಿಂಗೊಳಗಾದವು.

Verse 8

ಎನ್ ಮಣಿಯೇ ಅಘೋರ ಕಷ್ಟ
ಬಂದಾಗ್ಯು ಪ್ರೀತಿ ಕುಂದದು.
ನಿನ್ನಾಳು ನಾನು ಪ್ರಾಣನಷ್ಟ
ನಂಗೇನು? ಕರ್ತ ಸಲಹು
ಹೃದ್ ಭಿನ್ನವಾಗೊ ವರೆಗು
ನೀ ಜೀವ ಜ್ಯೋತಿಯು.

Go to top