Verse 1

ಯೇಸು ನಮ್ಮ ರಕ್ಷಕ
ಪಾಪಪರಿಹಾರದಾನ
ಆತ ಸಿದ್ದ ಮಾಡಿದ.
ಕೇಳಿರೀ ಸುವರ್ತಮಾನ
ಧೈರ್ಯವಾಗಿ ನಂಬುವ
ಯೇಸುವೆಮ್ಮ ರಕ್ಷಕ.

Verse 2

ಯೇಸು ನಮ್ಮ ಕುರುಬ
ನಿಜ ರೊಟ್ಟಿ ನಿಜ ಪಾನ
ಸಿದ್ಧ ಮಾಡಿ ಪುಷ್ಕಲ
ಒಳ್ಳೇ ಊಟ ಒಳ್ಳೇ ದಾನ
ತನ್ನ ಕುರಿಗಿಡುವ
ಯೇಸುವೆಮ್ಮ ಕುರುಬ.

Verse 3

ಯೇಸು ನಮ್ಮ ಸ್ನೇಹಿತ
ಕಷ್ಟವಾದರೂ ಅಭಯ
ಕೊಟ್ಟು ನಮ್ಮ ಕಾಯುವ.
ನಾವು ಆತನೊಳ್ಳೇ ದಯ
ನೋಡಿ ಪ್ರೀತಿ ಮಾಡುವ
ಯೇಸುವೆಮ್ಮ ಸ್ನೇಹಿತ.

Verse 4

ಯೇಸು ನಮ್ಮ ಬೋಧಕ
ಆತ ಬೋಧಿಸಿದ ರೀತಿ
ಬೆಳಕುಳ್ಳ ಶುದ್ಧತ್ವ
ನಿಜ ಪ್ರೀತಿ ಸತ್ಯ ನೀತಿ
ಈ ಸದ್ಭೋಧೆ ಕೇಳುವ
ಯೆಸುವೆಮ್ಮ ಬೋಧಕ.

Verse 5

ಯೇಸು ನಮ್ಮ ಯಾಜಕ
ಆತನೇ ಮಧ್ಯಸ್ಥಗಾರ.
ತನ್ನ ರಕ್ತ ಚೆಲ್ಲಿದ
ಹೊತ್ತುಕೊಂಡು ನಮ್ಮ ಭಾರ
ದಿವ್ಯ ಯಜ್ಞ ಮಾಡಿದ
ಯೇಸುವೆಮ್ಮ ಯಾಜಕ.

Verse 6

ಯೇಸು ನಮ್ಮ ಕರ್ತನು
ಸಾಲ ತೆತ್ತನೆಮಗಾಗಿ
ಬೆಳ್ಳಿಯಲ್ಲ ನೆತ್ತರು
ಕೊಟ್ಟಿದ್ದಾನೆ ಕ್ರಯವಾಗಿ
ನಾವು ಆತನವರು
ಯೇಸುವೆಮ್ಮ ಕರ್ತನು.

Verse 7

ದೇವಪುತ್ರ ಯೇಸುವೆ
ನೀನೆ ನನ್ನ ಯಜಮಾನ
ನಿನ್ನ ಸೇವೆ ಹಿಡಿದೆ
ನೀ ಬೇಕಾದ ಶಕ್ತಿದಾನ
ನಂಗೆ ದಯಪಾಲಿಸು
ರಕ್ಷಕಾರ್ಯ ತೀರಿಸು.

Go to top