2 ಕೊರಿಂಥದವರಿಗೆ 1:3
ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾ ಗಿರುವ ದೇವರೂ ಕನಿಕರವುಳ್ಳ ತಂದೆಯೂ ಸಕಲ ವಿಧವಾಗಿ ಸಂತೈಸುವಾತನೂ ಆಗಿರುವ ದೇವರಿಗೆ ಸ್ತೋತ್ರ.
 
ಯೆಶಾಯ 51:3
ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್‌ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
 
ರೋಮಾಪುರದವರಿಗೆ 15:4-6
4  ನಾವು ತಾಳ್ಮೆಯ ಮತ್ತು ಬರಹಗಳ ಆದರಣೆಯ ಮೂಲಕ ನಿರೀಕ್ಷೆ ಹೊಂದುವಂತೆ ಪೂರ್ವಕಾಲದಲ್ಲಿ ಬರೆಯಲ್ಪಟ್ಟವುಗಳೆಲ್ಲಾ ನಮಗೆ ಉಪದೇಶಿಸುವ ದಕ್ಕಾಗಿಯೇ ಬರೆಯಲ್ಪಟ್ಟವು.
5  ನೀವು ಕ್ರಿಸ್ತ ಯೇಸು ವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ತಾಳ್ಮೆಯೂ ಆದರಣೆಯೂ ಉಳ್ಳ ದೇವರು ನಿಮಗೆ ಅನುಗ್ರಹಿಸಲಿ.
6  ಹೀಗೆ ನೀವು ಏಕ ಮನಸ್ಸಿನಿಂದಲೂ ಒಂದೇ ಬಾಯಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಮಹಿಮೆಪಡಿಸುವಿರಿ.
 
Go to top