Verse 1

ಇನ್ನುಂಟು ನಿನಗೊಂದು ಶಾಂತಿ
ಬೇಸತ್ತ ಹೃತ್ತೆ ಶೋಭಿಸು.
ನೀ ಬಯ್ಸುವಂಥ ಸೂರ್ಯಕಾಂತಿ
ಈ ಸೆರೆಯಲ್ಲಿ ಕಾಣದು.
ಆ ಕುರಿಮರಿ ನೋಡು ಅಲ್ಲಿ
ಸದಾ ಸಂತುಷ್ಟನಾಗ ಬಲ್ಲಿ.
ಈ ಬೀಯ ಹೊರೆ ಬಿಸುಡು
ಹೋರಾಟ ಬೇಗ ಮುಗಿಯೋದು
ಈಗೀಗ ಗುರಿ ಕಾಣಿಸೋದು
ವಿಶ್ರಾಂತಿ ಬೇಗ ಬಪ್ಪುದು.

Verse 2

ಅನಂತವಾದ ಶಾಂತಿಯನ್ನು
ಅನಾದಿಯಿಂದ ದೇವರು
ಇನ್ನ್ ಹುಟ್ಟ ತಕ್ಕ ಮಕ್ಕಳನ್ನು
ಮುನ್ನೆನ್ದು ಸಿದ್ಧ ಗೈದನು.
ಕ್ರಿಸ್ತ್ಯೇಸು ನಿತ್ಯ ಶಾಂತಿಗಾಗಿ
ಸ್ವಜೀವ ಕೊಟ್ಟು ಬಲಿಯಾಗಿ
ಬೇಸತ್ತ ಪಾಪಿಜಾತಿಗೆ
ವಿಶ್ರಾಂತಿ ಕೊಂಡುಕೊಂಡಿದ್ದಾನೆ
ಅಮೋದವಾಗಿ ಸಾರುತಾನೆ
ವಿಶ್ರಾಂತಿವಾಕ್ಯ ಲೋಕಕೆ.

Verse 3

ಇಂಪಾದ ಮೇಳವನ್ನು ಕೇಳಿ
ನಿರಾಶೆ ಬಿಡಿ ಭಕ್ತರೇ
ಸಾಕಾಯ್ತು ಚಿಂತೆ ಎಂತ ಹೇಳಿ
ಆಯಾಸ ಪಟ್ಟ ಮಕ್ಕಳೇ.
ಅಸಹ್ಯ ಭಾರ ತೆಗೆದಿಟ್ಟು
ಸಂಪೂರ್ಣ ದೃಢ ನಂಬಿಕಿಟ್ಟು
ಕ್ರಿಸ್ತ್ಯೇಸು ಕೊಟ್ಟ ವಾಕ್ಯದಿ
ಸೈತಾನ ಹೆದರಿಸುವಲ್ಲಿ
ನೀವಂಜ ಬೇಡಿ ಕರ್ತನಲ್ಲಿ
ವಿಶ್ವಾಸವಿಟ್ಟು ಬನ್ನಿರಿ.

Verse 4

ರೋಗಿಷ್ಠಗಾಶೆ ಬೇರೆ ಏನು?
ಪ್ರಯಾಣಕ್ಕೇನವಶ್ಯವು?
ಮೆತ್ತಾನ ಸಜ್ಜೆಯಲ್ಲದೇನು
ರೋಗಿಷ್ಠ ಕೇಳಿಕೊಂಬನು?
ಯಾತ್ರಸ್ಥ ತಂಪು ನೀರಿನಿಂದ
ದಾಹಾಗ್ನಿಯಾರಿಸೋದರಿಂದ
ಸಂಪೂರ್ಣ ತೃಪ್ತನಾಹನು.
ಈ ಲೋಕದೊಳಗಲ್ಪ ಶಾಂತಿ
ಆ ಲೋಕದೊಳ್ ಮಹಾ ವಿಶ್ರಾಂತಿ
ಎಂದೆಂದಿಗದು ತೀರದು.

Verse 5

ಇಲ್ಲ್ಯತ್ತು ಬೀಜ ಬಿತ್ತುತೇವೆ
ಅಲ್ಲ್ಯರ್ತಿಯಿಂದ ಕೊಯ್ಯದು
ಅನಾಥರಾಗಿ ಇಲ್ಲಿದ್ದೇವೆ
ಅಲ್ಲೆಮ್ಮ ತಂದೆಮನೆಯು
ಅಲ್ಲೆಮಗೊಂದೂ ಚಿಂತೆಯಿಲ್ಲ
ಅಲ್ಲೈದಿದಂಗೆ ಮೃತ್ಯುವಿಲ್ಲ
ನಮ್ಮರಸನ್ನ ಕಾಣ್ಬೆವು.
ಅಮೃತವಾತ ಕುಡಿಸೋನು
ಕಣ್ಣೀರನೊರ್ಸಿ ತೆಗೆಯೋನು.
ಇಷ್ಟಾರ್ಥವೆಲ್ಲ ಬಪ್ಪುದು.

Verse 6

ಅಲ್ಲಿರ್ವ ಸಮಾಧಾನವನ್ನು
ಹೊಂದೋಣ ಚಿಂತೆಯಿಲ್ಲದೆ
ಆಶ್ರೈಸಿಕೊಳ್ಳಿ ಕರ್ತನನ್ನು
ಆಯಾಸ ಪಟ್ಟ ಜನರೆ.
ಆ ತೇಜೊಮಯ ಸೇನೆ ಯಾರು?
ನನ್ನಾತ್ಮ ರೆಕ್ಕೆ ಎತ್ತಿ ಹಾರು
ಇನ್ನಿಲ್ಲಿ ನಿಲ್ಲಲೇತಕೆ?
ಏಳ್ ನಡು ಕಟ್ಟು ತೀವ್ರವಾಗಿ
ಏಳೇಳು ಜಯಶಾಲಿಯಾಗಿ
ವಿಶ್ರಾಂತಿ ವರ್ಷ ಬಂದದೆ.

Go to top