Verse 1

ತಂದೆ ನಿನ್ನ ಆಶೀರ್ವಾದ
ರಾಷ್ಟ್ರಪತಿಗಾಗಲಿ.
ಆತನಿಂದ ನಿನ್ನ ಶ್ರೇಷ್ಠ
ಚಿತ್ತ ನೆರವೇರಲಿ.
ನಿನ್ನ ಸಭಾರಕ್ಷಣೆ
ಶತ್ರುಸೇನಾಶಿಕ್ಷಣೆ
ಆಗುವಂತೆ ದಯಮಾಡು
ರಾಷ್ಟ್ರಪತಿಗಾಶೀರ್ವಾದ.

Verse 2

ಸದ್ವಿಶ್ವಾಸವೇ ಗುರಾಣಿ
ಖಡ್ಗ ನಿನ್ನ ಆತ್ಮವೆ
ನ್ಯಾಯ ನೀತಿ ಶಾಂತಿ ಪ್ರೀತಿ
ಇವು ರಾಷ್ಟ್ರಬೂಷಣೆ
ರಾಜ್ಯ ಕಾರ್ಯ ಸಿದ್ದಿಯು
ದೇಶದೋಳ ಸಮೃದ್ಧಿಯು
ಇವನೆಲ್ಲಾ ದಯಮಾಡು
ರಾಷ್ಟ್ರಪತಿಗಾಶೀರ್ವಾದ.

Verse 3

ಜ್ಞಾನವುಳ್ಳ ಮಂತ್ರಿಸಭೆ
ಜಯಶಾಲಿ ಸೈನ್ಯವು
ನಂಬಿಗಸ್ತ ಪರಿಚಾರ
ಸ್ವಾಮಿನಿಷ್ಠಾಪ್ರಜೆಯು
ರಾಜ್ಯದಲ್ಲಿ ಭದ್ರತೆ
ಕ್ಷೇಮ ರಾಷ್ಟ್ರಪÀತಿಗೆ
ಇರುವಂತೆ ದಯಾಮಾಡು
ರಾಷ್ಟ್ರಪತಿಗಾಶೀವಾರ್ದ.

Verse 4

ಕರ್ತಾ ನಮ್ಮ ರಾಜ್ಯದಲ್ಲಿ
ನಿನ್ನ ರಾಜ್ಯ ಸ್ಥಾಪಿಸು.
ರಾಷ್ಟ್ರಪತಿ ಪ್ರಜೆಯನ್ನು
ಸ್ವರ್ಗವಾಸಕ್ಕೈದಿಸು.
ಸಿಕ್ಕಲಿ ಮನಶ್ಯಾಂತಿ
ಅಲ್ಲಿ ನಿತ್ಯ ವಿಶ್ರಾಂತಿ
ಬೇಡಿದ್ದನ್ನು ದಯಮಾಡು
ರಾಷ್ಟ್ರಪತಿಗಾಶೀರ್ವಾದ.

Go to top