Verse 1

ಬನ್ನಿ ಪಶ್ಚಾತ್ತಾಪದಿಂದ
ಸ್ವಾಮಿಗಡ್ಡ ಬೀಳುವ
ಆತನಲ್ಲಿ ಕೃಪೆಯುಂಟು
ಆತ ಶಾಂತಿದಾಯಕ.

Verse 2

ಶಿಕ್ಷಿಸಿದ ನೀತಿಯಿಂದ
ಪ್ರೀತಿ ತೋರಿಸುವನು
ಪೆಟ್ಟುಕೊಟ್ಟ ಹಸ್ತದಿಂದ
ಪೂರ್ಣ ವಾಸಿಮಾಡೊನು.

Verse 3

ದುಃಖ ತಾಪತ್ರಯ ಹೆಚ್ಚಿ
ರಾತ್ರಿಯಂತೆ ಮುಚ್ಚಲು
ನೀತಿಸೂರ್ಯ ಯೇಸು ಮೂಡಿ
ಹರ್ಷ ಹುಟ್ಟಿಸಿದನು.

Verse 4

ಹ್ಯಾಗೆ ಮೊಳಿಕೆಯ ಮೇಲೆ
ತಿಳಿ ಮಂಜು ಬೀಳುತ್ತೋ
ಹಾಗೆ ನಮ್ಮ ಮೇಲೆ ಕೃಪೆ
ಸುರಿಸುವನಲ್ಲವೋ?

Verse 5

ಮಳೆಯಿಂದ ಚಂದ ಪುಷ್ಪ
ಅರಳುವ ಮೇರೆಗೆ
ನಮ್ಮ ಮನದೊಳಾನಂದ
ಹುಟ್ಟಿ ತೃಪ್ತಿಯಾಗುತ್ತೆ.

Verse 6

ಬನ್ನಿ ಪಶ್ಚಾತ್ತಾಪದಿಂದ
ಸ್ವಾಮಿಗಡ್ಡ ಬೀಳುವ
ಆತನಲ್ಲಿ ಕೃಪೆಯುಂಟು
ಆತ ಶಾಂತಿದಾಯಕ.

Go to top