Verse 1

ಇಂದು ಕ್ರಿಸ್ತ ಯೇಸುವು
ಸೇರಿ ಪರಲೋಕದಲ್ಲಿ
ರಾಜನಾದ ದಿನವು
ತಂದೆ ಬಲಗಡೆಯಲ್ಲಿ
ಕೂತ ಚಕ್ರವರ್ತಿಗೆ
ಅಡ್ಡ ಬೀಳು ಪ್ರಜೆಯೆ.

Verse 2

ಎಲ್ಲ ಅಧಿಕಾರವ
ಯೇಸು ಇಹಪರದಲ್ಲಿ
ಹೊಂದಿ ಸ್ವಂತ ಜನರ
ಆಳುತಾನೆ ಪ್ರೀತಿಯಲ್ಲಿ
ಶತ್ರು ಶಕ್ತನಾದರೂ
ಕೇಡು ಮಾಡಲಾರನು.

Verse 3

ಕೊಡು ನಿನ್ನ ಪ್ರಜೆಗೆ
ನಿನ್ನ ರಾಜ್ಯಸ್ವಾಸ್ತ್ಯವನ್ನು
ನಿನ್ನ ಸಭೆಗ್ಯೇಸುವೆ
ಕೊಡು ನಿತ್ಯ ಸ್ಥಾನವನ್ನು
ನೀನು ಜೈಸಿದಂತೆಯೆ
ಜಯ ಕೊಡು ನಮಗೆ.

Verse 4

ನಿನ್ನ ದಿನ ಬಂದರೆ
ಪೂರ್ಣ ಧೈರ್ಯವಾಗಿದ್ದೇವೆ
ನಿನ್ನ ಸನ್ನಿಧಾನಕೆ
ಬರ ಸಿದ್ಧ ಮಾಡುತ್ತೇವೆ.
ನಿನ್ನ ಮುಖಕಾಂತಿಯೇ
ನಮ್ಮ ಜೀವ ಕ್ರಿಸ್ತನೇ.

Go to top