Verse 1

ಕ್ರಿಸ್ತ್ಯೇಸು ನಿನ್ನ ಶ್ರೀ ಸಾಮಿಪ್ಯ
ಆಂತರ್ಯಕ್ಕೀಯೋದು ಶಾಂತಿಯ
ರಮ್ಯವಾದ ನಿನ್ನ ಕಟಾಕ್ಷದೃಷ್ಟಿ
ಸಂತೋಷಪೂರಿತ ಪ್ರಿಯ ವೃಷ್ಟಿ
ದೇಹಾತ್ಮಕೆ.

Verse 2

ನಿನ್ ನಸುನಗೆಯ ಮೋರೆಯು
ಈಗೆಮ್ಮ ಕಣ್ಣಿಗೆ ಕಾಣದು
ಆತ್ಮದಲ್ಲಿ ನಿನ್ನ ಅನಂತ ಪ್ರೀತಿ
ನಮ್ಮನ್ನು ಹರಸುವಂಥ ರೀತಿ
ಪ್ರತ್ಯಕ್ಷವು.

Verse 3

ನಿನ್ನಲ್ಲಿ ಹಗಲು ಇರುಳು
ಸಂಯುಕ್ತ ಜನರು ಮುಕ್ತರು
ಬುದ್ದ್ಯತೀತ ಕಾರುಣ್ಯತುಂಬಿದಂಥ
ಸಮಸ್ತ ಪಾಪವಂ ಮನ್ನಿಪಂಥ
ಆತ್ಮಾಪ್ತನೇ.

Verse 4

ನಿನ್ನಿಂದ ದುಃಖದ ಹರವು
ನಿನ್ಹೊರ್ತು ಸುಖವು ಕಾಣದು.
ನಿನ್ನ ಪ್ರೀತಿಧ್ಯಾನವು ಪೂರ್ಣವಾಗಿ
ನಮ್ಮಲ್ಲಿ ವಾಸಿಸುತ್ತಿರಲಾಗಿ
ತೃಪ್ತ್ಯಾಯಿತು.

Verse 5

ನಿನ್ನಿಂದ ಸುಖದ ದಾನವು
ಈ ಬಡ ಪಾಪಿಗೆ ಬಂದುದು
ನಿನ್ನ ಪ್ರೀತಿ ಕಂಡು ನಾನಿಂದಿನಿಂದ
ನಿನ್ನನು ಸಂತೋಷಧ್ವನಿಯಿಂದ
ಕೊಂಡಾಡುವೆ.

Go to top