Verse 1

ಯೆಹೋವನ
ಆಶ್ರಯದುರ್ಗದಿ
ಹೊಕ್ಕಿರುವವನೂ
ಸರ್ವೇಶನ
ಕೃಪಾವಾತ್ಸಲ್ಯದಿ
ನೆಲ್ಗೊಂಡ ಭಕ್ತನೂ
ವಿಶಿಷ್ಟ ಸುಖದುಃಖದಲ್ಲಿ
ಸಮಸ್ತ ರಾಜ್ಯಕ್ಷೋಭೆಯಲ್ಲಿ
ಸುಭದ್ರನೇ.

Verse 2

ಯೆಹೋವನ
ಅಪ್ರತಿ ಸ್ನೇಹವೆ
ಅಭಯವೆನಗೆ.
ಶತ್ರುಂಗಳ
ಉಪಾಯತಂತ್ರಕೆ
ನಾನೆಂದೂ ಹೆದರೆ.
ಶೋಕಾಬ್ಧಿ ತೆರೆನೊರೆಯಲ್ಲಿ
ನನ್ನನ್ನು ಮೃತ್ಯು ಹಿಡಿದಲ್ಲಿ
ನಾ ಬಾಳುವೆ.

Verse 3

ಯೆಹೋವನ
ವಾಗ್ದತ್ತವೆಲ್ಲವು
ಸಂಪೂರ್ಣವಹುದು.
ಸನ್ಮಾರ್ಗದ
ತುದೀಲಿ ಮೋಕ್ಷವು
ಭಕ್ತಂಗೆ ತಪ್ಪದು.
ದೇವಾನುಗ್ರಹವೆನ್ನ ತೋಷ
ಪವಿತ್ರ ವಾಕ್ಯ ನನ್ನ ಪೋಷ
ಭೂಯಾತ್ರೆಗೆ.

Verse 4

ಯೆಹೋವನ
ಕೃಪಾಕಟಾಕ್ಷವು
ನನ್ನಿಷ್ಟ ಪದವಿ.
ದಯಾತ್ಮನ
ಸುಶಿಕ್ಷೆ ಬರಲು
ಪ್ರಲಾಪಕಾಲದಿ
ವಿಧೇಯನಾಗಿ ಬೊಗ್ಗುತ್ತೇನೆ
ಬಾಯ್‍ಮುಚ್ಚಿ ಒಡಂಬಟ್ಟಿದ್ದೇನೆ
ದೇವಾಜ್ಞೆಗೆ.

Verse 5

ಯೆಹೋವನ
ಮಹಾಂತಃಕರಣ
ಅಪರಿಮಿತವು.
ಪಾಪಾತ್ಮನ
ವಿನಾಶ ಮರಣ
ಇಚ್ಛೈಸನೆಂದಿಗು.
ದುರ್ಗತ ಶಾಪಗ್ರಸ್ತರನ್ನು
ವಿಮುಕ್ತಿ ಮಾಡೋ ಕ್ರಿಸ್ತನನ್ನು
ತಾ ಕೊಟ್ಟನು.

Verse 6

ಯೆಹೋವನ
ಆಶ್ರಯದುರ್ಗವ
ಹೊಕ್ಕಿರು ಬಿಡದೆ.
ಸರ್ವೇಶನ
ಕೃಪಾವಾತ್ಸಲ್ಯವ
ನಂಬೆನ್ನ ಮನವೇ.
ವಿಶ್ವಾಸಿಸೋ ಹೋರಾಟದಲ್ಲಿ
ಗಟ್ಟ್ಯಾಗಿ ನಿಲ್ಲು ನಿನಗಲ್ಲಿ
ಸೌಭಾಗ್ಯವೇ.

Go to top